Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾರಿಗೋಲ್ಡ್ ಬಂಗಾರ ತಂದಿತ್ತ ಆಪತ್ತು ...ರೇಟಿಂಗ್: 3/5 ***
Posted date: 06 Sat, Apr 2024 09:07:37 AM
ಚಿನ್ನ, ಸಂಪತ್ತನ್ನು  ಶ್ರಮ ಹಾಕಿ ಗಳಿಸಬೇಕೇ ಹೊರತು, ಮೋಸದಿಂದ ಗಳಿಸಿದ ಬಂಗಾರ ಯಾವತ್ತೂ ನೆಮ್ಮದಿ ತರದು ಎಂಬ ಮೆಸೇಜ್ ಇಟ್ಟುಕೊಂಡು ಈವಾರ ತೆರೆಕಂಡಿರುವ ಚಿತ್ರ ಮಾರಿಗೋಲ್ಡ್. ಇದು ಡಿಮಾನಿಟೈಜೇಶನ್ ಸಂದರ್ಭದಲ್ಲಿ ನಡೆಯುವ ಕಥೆ.
 
ಗೆಳೆಯರಾದ ಬಾಲಾಜಿ(ಯಶ್ ಶೆಟ್ಟಿ), ಸುಧಿ(ಕಾಕ್ರೋಚ್ ಸುಧಿ), ಜೊತೆಗೂಡಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಕೃಷ್ಣ(ದಿಗಂತ್) ಒಮ್ಮೆ  ದೊಡ್ಡ ಪ್ಲಾನ್  ಮಾಡಿ ಬಂಗಾರದ ಕಣಜವನ್ನೇ ಬೇಟೆಯಾಡಲು ಮುಂದಾಗುತ್ತಾನೆ. ಪೊಲೀಸ್ ಅಧಿಕಾರಿಗಳು ಅನಧಿಕೃತವಾಗಿ ಕೂಡಿಟ್ಟಿದ್ದ ೨೦ ಕೋಟಿ ಬೆಲೆಬಾಳುವ ಬಂಗಾರದ ಬಿಸ್ಕೆಟ್‌ಗಳನ್ನು ಕದ್ದು, ಅದರಿಂದ ನೆಮ್ಮದಿಯ ಜೀವನ ನಡೆಸಬೇಕು ಅನ್ನೋದು ಆತನ ಲೆಕ್ಕಾಚಾರ. ತಾನು ಗೆಳೆಯರಾದ ಯಶ್ ಶೆಟ್ಟಿ, ಕಾಕ್ರೋಚ್  ಜೊತೆಗೂಡಿ ದಿನಾ ಬಾರ್‌ಗೆ ಹೋದಾಗ ಅಲ್ಲಿ ಡಾನ್ಸರ್ ಆಗಿದ್ದ  ಸೋನು(ಸಂಗೀತಾ ಶೃಂಗೇರಿ)ವನ್ನು ಕೂಡ ತಮ್ಮ ಜೊತೆ ಸೇರಿಸಿಕೊಳ್ಳುತ್ತಾರೆ.  ಈ ನಾಲ್ವರು ಸೇರಿ  ಬಂಗಾರದ ಬಿಸ್ಕೆಟ್‌ಗಳನ್ನು ಕದ್ದ ಮೇಲೆ ಅವರೆಲ್ಲ  ಜೀವನದಲ್ಲಿ ಸೆಟಲ್  ಆಗುತ್ತಾರಾ, ಇಲ್ವಾ  ಅನ್ನೋದೇ ಮಾರಿಗೋಲ್ಡ್ ಚಿತ್ರದ ಕಥೆ. ಅದು ಡಿ ಮಾನಿಟೈಸೇಷನ್ ಜಾರಿಯಾದ ಸಮಯ.  ಮನೆಯ ಮೂಲೆ ಮೂಲೆಗಳಲ್ಲಿ  ಬ್ಲಾಕ್ ಮನಿ ಇಟ್ಟುಕೊಂಡವರೆಲ್ಲ ನಡುಗಿಹೋದಂಥ ಸಮಯ. ಕೃಷ್ಣನಿಗೆ ಪೊಲೀಸರೆಲ್ಲ ತಾವು ಅನಕೃತವಾಗಿ ಗಳಿಸಿದ ಹಣವನ್ನೆಲ್ಲ ಬಂಗಾರದ ಬಿಸ್ಕೆಟ್‌ಗಳಾಗಿ ಪರಿವರ್ತಿಸಿ ಅದನ್ನು ಒಂದು ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿರುವುದು ಗೊತ್ತಾಗುತ್ತದೆ, ಆ ಬಂಗಾರದ ಬಿಸ್ಕಿಟ್‌ಗಳನ್ನು ಎಗರಿಸಲು ಒಂದು ಗ್ಯಾಂಗ್ ಪ್ಲಾನ್ ಮಾಡುತ್ತದೆ, ಆ ಗ್ಯಾಂಗ್ ಯಾವಾಗ, ಹೇಗೆ  ಆ ಗೋಲ್ಡ್ ಬಿಸ್ಕಟ್‌ಗಳನ್ನು ರಹಸ್ಯ ಸ್ಥಳದಿಂದ ಕದಿಯಲು ಯೋಜನೆ ಹಾಕಿಕೊಳ್ಳುತ್ತದೆ ಎಂದು ಸೋನು ಮೂಲಕ  ತಿಳಿದುಕೊಳ್ಳುತ್ತಾನೆ. ಅದರಂತೆ  ಆ ದಿನ ಅವರೆಲ್ಲ ಸಿದ್ದರಾಗುತ್ತಾರೆ. ಎಲ್ಲರೂ 5 ಕೋಟಿ ರೂ, ಪಾಲು ತಮ್ಮದಾಗುತ್ತದೆ ಎನ್ನುವ ಖುಷಿಯಲ್ಲಿರುತ್ತಾರೆ. ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.   ಯೋಜನೆಯಂತೆ ಆ ಗ್ಯಾಂಗ್ ಬಂಗಾರನ್ನು ಕದ್ದು ಜೀಪ್‌ನಲ್ಲಿ ವಾಪಸ್ ಬರುವಾಗ ಟೈರ್ ಪಂಚರ್ ಆಗುವಂತೆ ಮಾಡಿ ಜೀಪ್ ಮುಂದೆ ಹೋಗದಂತೆ ಮಾಡಿ ಕಳ್ಳರನ್ನು ಅಟ್ಯಾಕ್ ಮಾಡಿ ಬಿಸ್ಕಟ್ ಎಗರಿಸುವುದು ಅವರ ಪ್ಲಾನ್ ಆಗಿರುತ್ತದೆ, ಅವರ ಪ್ಲಾನ್ ಪ್ರಕಾರ ಎಲ್ಲವೂ ನಡೆಯಿತೆ, ಅಥವಾ ಪ್ಲಾನ್ ಉಲ್ಟಾ ಆಯಿತೇ  ಎಂದು ತಿಳಿಯಲು ನೀವು ಥೇಟರಿಗೆ ಹೋಗಿ ಚಿತ್ರ ವೀಕ್ಷಿಸಲೇಬೇಕು.  
 
ಮೇಲ್ನೋಟಕ್ಕೆ ಇದೊಂದು ಸಿಂಪಲ್ ಕಥೆಯಾದರೂ, ಟೈಟಾದ ಚಿತ್ರಕಥೆ, ಸ್ಪಷ್ಟ ನಿರೂಪಣೆಯ ಮೂಲಕ ನಿರ್ದೇಶಕ ರಾಘವೇಂದ್ರ ನಾಯಕ್ ಎಲ್ಲರ ಗಮನ ಸೆಳೆಯುತ್ತಾರೆ.  ಒಂದು ಸಿಂಪಲ್ ಕಥೆಗೆ ಹಲವು ಟ್ವಿಸ್ಟ್ಗಳನ್ನು ಕೊಟ್ಟು, ಇಡೀ ಚಿತ್ರವನ್ನು ಮತ್ತಷ್ಟು  ರೋಚಕವಾಗಿಸುತ್ತಾರೆ. ಸಣ್ಣ ಪುಟ್ಟ  ತಪ್ಪುಗಳನ್ನು  ಹೊರತುಪಡಿಸಿದರೆ ಮಾರಿಗೋಲ್ಡ್  ಒಂದು  ಎಂಟರ್ ಟೈನಿಂಗ್ ಪ್ಯಾಕೇಜ್ ಎನ್ನಬಹುದು. ನಿರ್ದೇಶಕರ ಈ  ಕಥೆಗೆ ಇನ್ನಷ್ಟು ಜೀವಂತಿಕೆ ತುಂಬಿರುವುದು ರಘು ನಿಡುವಳ್ಳಿ  ಅವರ ಪಂಚ್ ಡೈಲಾಗ್‌ಗಳು.  ಆ ಮೂಲಕ ಸಿನಿಮಾ ಎಲ್ಲೂ  ಬೋರಾಗದಂತೆ ಸರಿತೂಗಿಸಿಕೊಂಡು ಹೋಗಿದ್ದಾರೆ. 
 
ವೀರ್‌ಸಮರ್ಥ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು, ಮೇಕಿಂಗ್ ಚೆನ್ನಾಗಿದೆ.  ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ, ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾವರ್ಕ್ ಉತ್ತಮವಾಗಿದೆ. ಹಣದ ದುರಾಸೆ ಮನುಷ್ಯನನ್ನು ಯಾವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ, ಸ್ನೇಹದ ಮಹತ್ವ ಏನು, ಪ್ರೀತಿಯ ಆಳ ಎಂಥದ್ದು ಇದನ್ನೆಲ್ಲ ಚಿತ್ರಕಥೆಯಲ್ಲಿ ತಂದಿರುವ ನಿರ್ದೇಶಕರು ಜೊತೆಗೊಂದು ಸುಂದರ ಸಂದೇಶವನ್ನೂ ಪ್ರೇಕ್ಷಕರಿಗೆ ಹೇಳಿದ್ದಾರೆ,  
ಈ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಕಲಾವಿದರ ನಟನೆ. ಅದರಲ್ಲೂ ದಿಗಂತ್ ಮತ್ತು ನಟ ಸಂಪತ್  ಅವರ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ.. ಪಂಚಿAಗ್ ಡೈಲಾಗ್, ಕಾಮಿಡಿ ಮೂಲಕವೇ ಗಮನ ಸೆಳೆಯುತ್ತಾರೆ. ಪೊಲೀಸ್  ಪಾತ್ರದಲ್ಲಿ ಸಂಪತ್ ಅತ್ಯುತ್ತಮ ಅಭಿನಯ ನೀಡಿದ್ದು, ಅವರ ಪಾತ್ರಕ್ಕೆ ಹಲವು ಶೇಡ್‌ಗಳಿವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾರಿಗೋಲ್ಡ್ ಬಂಗಾರ ತಂದಿತ್ತ ಆಪತ್ತು ...ರೇಟಿಂಗ್: 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.